Wednesday 5 December 2007

ಮಹಾಕಾವ್ಯ

ನೀನೇಕೆ ಬರೆಯುವುದಿಲ್ಲ ಎಂದು ಕೇಳಿತು ಪದ್ಯ
ನಾನ್ಯಾಕೆ ಬರೆಯಲಿ ನಿನ್ನ, ನನಗೆ ಕವನ ಬರೆಯಲಿಕ್ಕಿದೆ ಎಂದು ಗದರಿದೆ
ಒಂದೆರಡು ದಿನ ಬಿಟ್ಟು
ನೀನ್ಯಾಕೆ ಬರೆಯುವುದಿಲ್ಲ ಎಂದು ಕೇಳಿತು ಕವನ
ನಾನ್ಯಾಕೆ ಬರೆಯಲಿ ನಿನ್ನ, ನನಗೆ ಕಾವ್ಯ ಬರೆಯಲಿಕ್ಕಿದೆ ಎಂದು ಸಿಡುಕಿದೆ
ವಾರ ಕಳೆದು
ನೀನ್ಯಾಕೆ ಬರೆಯುವುದಿಲ್ಲ ಎಂದಿತು ಕಾವ್ಯ
ನಾನ್ಯಾಕೆ ಬರೆಯಲಿ ನಿನ್ನ, ನನಗೆ ಮಹಾಕಾವ್ಯ ಬರೆಯಲಿಕ್ಕಿದೆ ಎಂದು ಗುಡುಗಿದೆ
ಯುಗಾದಿ ಕಳೆದರೂ ಕಾಯುತ್ತಿದ್ದೇನೆ
ಕೇಳಲು ಬಂದೀತೇ ಮಹಾಕಾವ್ಯ...